ಹುನ್ನಾರ

ಕವಿತೆ ಹುನ್ನಾರ ಡಾ.ಸುರೇಖಾ ರಾಠೋಡ ಕಾಲಲಿ ಗೆಜ್ಜೆ ಹಾಕಿನನ್ನ ಚಲನವಲನನಿಯಂತ್ರಿಸುವಹುನ್ನಾರ ನಿನ್ನದು ಕೊರಳಲಿ ತಾಳಿ ಕಟ್ಟಿನನ್ನ ತಾಳ್ಮೆಪರೀಕ್ಷಿಸುವಹುನ್ನಾರ ನಿನ್ನದು ಕೈಯಲ್ಲಿ ಕೈ‌ಬಳೆ ತೊಡಿಸಿಏನು ಮಾಡದಂತೆಕೈಕಟ್ಟಿ ಹಾಕುವಹುನ್ನಾರ ನಿನ್ನದು ಹಣೆಗೆ ನಿನ್ನ ಹೆಸರಿನಕುಂಕುಮವ ಹಚ್ಚಿಸಿಹಣೆಯ ಬರಹವೆನಿನ್ನದಾಗಿಸಿಕೊಳ್ಳುವಹುನ್ನಾರ ನಿನ್ನದು ಕಾಲಿನ ಬೆರಳುಗಳಿಗೆಕಾಲುಂಗುರವ ತೊಡೆಸಿನಡೆಯನ್ನೆ ಕಟ್ಟಿ ಹಾಕುವಹುನ್ನಾರ ನಿನ್ನದು ಎಲ್ಲವ ತೊಡಿಸಿಕಟ್ಟಿ ಹಾಕಿರುವೇ ಎಂದುನೀ ಬಿಗುತ್ತಿರುವಾಗ …ನನ್ನ ಮನಸ್ಸನ್ನುಕಟ್ಟು ಹಾಕಲುಸಾಧ್ಯವೇ?… *********************************************************